ಚಿತ್ರದುರ್ಗ:ಚಿತ್ರದುರ್ಗದ ಅರಸರಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಪ್ರಬಲ ರಾಜ ಶ್ರೀ ರಾಜ ವೀರ ಮದಕರಿ ನಾಯಕ ಅವರ ಪಟ್ಟಾಭಿಷೇಕವಾದ ದಿನ ನಾಳೆ ರಾಜ್ಯದ್ಯಂತ ಮದಕರಿನಾಯಕ ಅಭಿಮಾನಿಗಳು ಪಟ್ಟಾಭಿಷೇಕ ದಿನವನ್ನು ಆಚರಿಸಲಿದ್ದಾರೆ ಚಿತ್ರದುರ್ಗದ ಇತಿಹಾಸದಲ್ಲಿ ಎಂದೂ ಮರೆಯಲಾಗದ ರಾಜ ಅದು ರಾಜ ವೀರ ಮದಕರಿ ನಾಯಕರು ರಾಜ ವೀರ ಮದಕರಿ ನಾಯಕರು ಪಟ್ಟಕ್ಕೆ ಬಂದಾಗ ಕೇವಲ ಅವರ ವಯಸ್ಸು 12 ವರ್ಷ ಮಾತ್ರ
ಚಿತ್ರದುರ್ಗದ ಮಹಾರಾಣಿ ರಾಜ ರಾಜಮಾತೆ ಗಂಡೋಬಳ ನಾಗತಿ ಅವರು ಚಿತ್ರದುರ್ಗದ ಮಹಾರಾಜನ ಪಟ್ಟಾಭಿಷೇಕ ಸಂದರ್ಭದಲ್ಲಿ ಅನೇಕ ವಿವಾದಗಳು ಪಕ್ಕಕ್ಕಿಟ್ಟು ಚಿತ್ರದುರ್ಗದ ರಾಜರಾಗಿ ದತ್ತು ಪಡೆದು ಚಿತ್ರದುರ್ಗದ ಅರಸರಾಗಿ ಅವರಿಗೆ ಪಟ್ಟ ಕಟ್ಟುತ್ತಾರೆ ಆ ಸಂದರ್ಭದಲ್ಲಿ ಅನೇಕ ಅಕ್ಕಪಕ್ಕದ ರಾಜ್ಯದ ಪಾಳೆಯಗಾರರು ಹಾಗೂ ರಾಜರು ದಾಳಿಗಳನ್ನು ನಡೆಸಿದರು ಕೂಡ ಎಲ್ಲ ದಾಳಿಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ರಾಜಮಾತೆ ಗಂಡು ಬಳವ ನಾಗತಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ನಂತರ ಪ್ರಾಯಕ್ಕೆ ಬಂದ ರಾಜ ವೀರ ಮದಕರಿ ನಾಯಕರು ದಾಳಿಗಳನ್ನು ಎದುರಿಸಿ ಹೈದರಾಲಿ ಮತ್ತು ಟಿಪ್ಪುಸುಲ್ತಾನರ ಚಿತ್ರದುರ್ಗವನ್ನು ಕಾಪಾಡಿ ಚಿತ್ರದುರ್ಗದಲ್ಲಿ ಜನರ ಮನಸ್ಸಿನಲ್ಲಿ ಮಿನುಗುವ ನಕ್ಷತ್ರವಾಗಿ ಉಳಿದಿದ್ದಾರೆ ಅಂತಹ ಮಹಾರಾಜ ಪಟ್ಟಾಭಿಷೇಕವಾದ ದಿನವನ್ನು ನಾಳೆ ಸ್ಮರಿಸಲಿದ್ದಾರೆ
No comments:
Post a Comment