Friday, June 25, 2021

ಕೊರೊನಾದ ಕಾರಣದಿಂದಾಗಿ‌ ಸರಳವಾಗಿ ಹುಟ್ಟುಹಬ್ಬದ ಆಚರಣೆ :ಮಹಾಂತೇಶ ನಾಯಕ

ಇಡೀ ದೇಶ ಕೊರೊನಾದ ವಿರುದ್ಧ ಹೋರಾಟ ಮಾಡುತ್ತಿರುವ ಈ ಸಂದರ್ಭವನ್ನು ನಾವು ಕಣ್ಣಾರೆ ಕಂಡಿರುವುದರಿಂದ ಈ ಬಾರಿ ಸರಳವಾಗಿ ತಮ್ಮ ಜನ್ಮದಿನ ಆಚರಿಸುವಂತೆ ತಮ್ಮ ಹಿತೈಷಿಗಳು ಹಾಗೂ ಅಭಿಮಾನಿಗಳಿಗೆ ಮಹಾಂತೇಶ ನಾಯಕ ಅವರು ತಿಳಿಸಿದ್ದಾರೆ, ಪ್ರತಿವರ್ಷದಂತೆ ಅದ್ದೂರಿ ಆಚರಣೆ ಬೇಡ ಎಂದಿದ್ದಾರೆ

ಜೂನ್ 26 ರಂದು ಅವರ ಜನ್ಮದಿನ ಇರುವುದರಿಂದ ಸರಳವಾಗಿ ಆಚರಿಸುವ ಮೂಲಕ ಜನರಿಗೆ ಧೈರ್ಯ ತುಂಬಿ ಕೊರೊನಾ ಎದುರಿಸಲು,ಶಕ್ತಿ ತುಂಬೋಣ ಎಂದಿದ್ದಾರೆ..




#ವಿಶೇಷ_ಲೇಖನ

#ಬಯಲುಸೀಮೆ_ನಾಯಕ_ಹೆಬ್ಬುಲಿ
ಈ ವ್ಯಕ್ತಿಗೆ ಸದ್ಯಕ್ಕೆ ರಾಜಕೀಯ ಹಿನ್ನೆಲೆ ಕಂಡರೂ ನಿರಂತರವಾಗಿ ಆತನನ್ನು ಗಮನಿಸಿದ ಎಂತವರಿಗೂ ಅನ್ನಿಸುವಂತದ್ದು ನಿತ್ಯ ನಿರಂತರವಾಗಿ ಏನಾದರೊಂದು ಸಮಾಜಮುಖಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುತ್ತಾರೆ
ಸುಮಾರು ಬಾರಿ ನಮ್ಮ ನಾಯಕ ಸಮಾಜದ ವಿಚಾರ ಬಂದಾಗ ಇವರು ಮಾಧ್ಯಮದಲ್ಲಿ ಚರ್ಚೆಯಲ್ಲಿ ತೊಡಗಿದ್ದನ್ನೂ ನೀವು ನೋಡಿರಬಹುದು
ಈ ರೀತಿಯ ಪರಿಚಯ ಮಾಡಿಕೊಟ್ಟರೆ ಸಾಕಾಗುವುದಿಲ್ಲ..!!

ಶ್ರೀ ಮಹಾಂತೇಶ ನಾಯಕ ಅವರು, ಮೂಲತಃ ಗಂಡುಮೆಟ್ಟಿದ ನಾಡು ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಕಾಲುವೇಹಳ್ಳಿ ಗ್ರಾಮದವರು, ಮಹಾಂತೇಶ ನಾಯಕ ಅವರು ತಮ್ಮ ಕಾಲೇಜು ದಿನಗಳಿಂದ ಎಬಿವಿಪಿ ಸಂಘಟನೆಯಲ್ಲಿ ಕಾರ್ಯಕರ್ತನಾಗಿ ನಂತರ ಎಬಿವಿಪಿ ಗಾಗಿ ಮನೆಬಿಟ್ಟು ಸುಮಾರು ಐದು ವರ್ಷಗಳ ಕಾಲ ಬಳ್ಳಾರಿಯಲ್ಲಿ ಅನೇಕ ವಿದ್ಯಾರ್ಥಿ ಪರ ಹೋರಾಟಗಳಲ್ಲಿ ಬಳ್ಳಾರಿ ಭಾಗದಲ್ಲಿ ಗುರುತಿಸಿಕೊಂಡರು,

 ನಂತರ ಚಿತ್ರದುರ್ಗಕ್ಕೆ ಬಂದ ಮಹಾಂತೇಶ ನಾಯಕ ಅವರು ಚಿತ್ರದುರ್ಗದ ಭವ್ಯ ಇತಿಹಾಸ ಪರಂಪರೆಯನ್ನು ಸ್ಮರಿಸುವ ಕೆಲಸಕ್ಕೆ ಕೈಜೋಡಿಸಿದರು ಚಿತ್ರದುರ್ಗದಲ್ಲಿ ಮಹಾರಾಜ ರಾಜ ವೀರ ಮದಕರಿ ನಾಯಕ ಅವರ ಹೆಸರಿನಲ್ಲಿ ರಾಜವೀರ ಮದಕರಿನಾಯಕ ಗೌರವ ಸಂರಕ್ಷಣಾ  ವೇದಿಕೆಯನ್ನು ಸ್ಥಾಪಿಸಿದರು ಇದರ ಮೂಲಕ ರಾಜ ವೀರ ಮದಕರಿ ನಾಯಕರ ಇತಿಹಾಸ ಸಂರಕ್ಷಣೆಯ ಕಾರ್ಯವನ್ನು ಹಾಗೂ ಚಿತ್ರದುರ್ಗದ ಭವ್ಯ ಪರಂಪರೆಯ ಬಗ್ಗೆ ಗೌರವವನ್ನು ಯುವಜನತೆಯಲ್ಲಿ ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು 

#ಮದಕರಿಗೆ_ಪಿತೃತರ್ಪಣ_ಕಾರ್ಯದ_ರೂವಾರಿ:-
ನಂತರ  ಚಿತ್ರದುರ್ಗದ ಅರಸರಲ್ಲಿ ಕೊನೆಯ ಮಹಾರಾಜರಾದ ರಾಜವೀರ ಮದಕರಿನಾಯಕ ಅವರನ್ನು ಟಿಪ್ಪು ಹೈದರ್ ಮೋಸದಿಂದ ಸೆರೆಯಲ್ಲಿದ್ದಾಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ತ್ರಿವೇಣಿ ಸಂಗಮದ ಬಳಿ ಅವರ ಅಂತ್ಯವಾಗಿತ್ತು ಆದರೆ ಅವರು ನಮ್ಮನ್ನು ಅಗಲಿ ಇಷ್ಟು ವರ್ಷಗಳಾದರೂ ಮದಕರಿನಾಯಕ ಅವರ ಅಂತ್ಯಸಂಸ್ಕಾರದ ಭಾಗವಾದ ಪಿತೃತರ್ಪಣ ಕಾರ್ಯಕ್ರಮವೇ ಆಗಿರಲಿಲ್ಲ, ಅಷ್ಟೇ ಕೊನೆಯ ಅರಸ ರಾಜವೀರ ಮದಕರಿನಾಯಕ ಅವರ ಸಾವಿನ ಬಗ್ಗೆ ಕೆಲವರಿಗಂತೂ ಮಾಹಿತಿಯೇ ಇರದೆ ಸುಳ್ಳು ಸುದ್ದಿ ಹಬ್ಬಿಸುವ ಪ್ರಕ್ಷುಬ್ಧ ಸ್ಥಿತಿಯನ್ನು ಕಂಡ ಮಹಾಂತೇಶ ನಾಯಕ ಅವರು ಮದಕರಿನಾಯಕ ಗೌರವ ಸಂರಕ್ಷಣಾ ವೇದಿಕೆಯ ಹೆಸರಿನಲ್ಲಿ ಚಿತ್ರದುರ್ಗದ ರಾಜವಂಶಸ್ತರ ಜೊತೆಗೆ  ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ತ್ರಿವೇಣಿ ಸಂಗಮಕ್ಕೆ ತೆರಳಿ ಬಾಕಿಯಿದ್ದ ಕಾರ್ಯಕ್ರಮಗಳನ್ನು ಮಾಡಿಸುವ ಮೂಲಕ ರಾಜ್ಯದ ಜನರ ಮನೆಮಾತಾದರು..

#ಮದಕರಿ_ವಿಚಾರ_ಗೋಷ್ಠಿಗಳು
ಅಷ್ಟೇ ಅಲ್ಲದೆ ಮದಕರಿನಾಯಕ ಅವರ ಹೆಸರಿನಲ್ಲಿ ವಿಚಾರ ಗೋಷ್ಠಿಗಳನ್ನು ಅಯೋಜಿಸಿ ಅನೇಕ ಸಂಪನ್ಮೂಲ ವ್ಯಕ್ತಿಗಳ ಮೂಲಕ ಮದಕರಿನಾಯಕ ಅವರ ಬಗ್ಗೆ ನಾಯಕ ಸಮುದಾಯ ಹಾಗೂ ಚಿತ್ರದುರ್ಗದ ಅರಸರು ಶೌರ್ಯ ವಿರಾಜಮಾನವಾದ ಇತಿಹಾಸದ ಬಗ್ಗೆ ಬೆಳಕು ಹಾಗೂ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು

#ಮದಕರಿ_ಥೀಮ್_ಪಾರ್ಕ್
ಚಿತ್ರದುರ್ಗಕ್ಕೆ ಕಳೆದ ಬಾರಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶ್ರೀ ಅಮಿತ್ ಶಾ ಜಿ ಅವರು ಚಿತ್ರದುರ್ಗದಲ್ಲಿ ಮದಕರಿನಾಯಕರ ಹೆಸರಿನಲ್ಲಿ ಭವ್ಯ ಥೀಮ್ ಪಾರ್ಕ್ ನಿರ್ಮಿಸುವುದಾಗಿ ಹೇಳಿಕೆ ನೀಡಿದ್ದರು ನಂತರ ಹೇಳಿಕೆಯನ್ನು ಆದರಿಸಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಮಹಾಂತೇಶ ಅವರು ಮದಕರಿನಾಯಕ ನಿರ್ಮಾಣದ ವಿಚಾರವಾಗಿ ರಾಜಧಾನಿ ದೆಹಲಿಯವರೆಗೆ ಹೋಗಿ ಅಲ್ಲಿನ ಪ್ರವಾಸೋದ್ಯಮ ಸಚಿವರನ್ನು ಹಾಗೂ ಪ್ರವಾಸೋದ್ಯಮ ಸಚಿವಾಲಯವನ್ನು ಭೇಟಿ ನೀಡಿ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಂಡರು ನಂತರ ಬೇರೆ ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ನಿರ್ಮಾಣವಾಗಿರುವ ಥೀಮ್ ಪಾರ್ಕುಗಳ ಮಾದರಿಗಳನ್ನು ಆಗಿನ ಕೇಂದ್ರ ಸಚಿವರಾದ ಡಿ ವಿ ಸದಾನಂದಗೌಡರ ಜೊತೆಗೆ ತೆರಳಿ ನೋಡಿ ಬಂದರು, ಸದ್ಯ ಚಿತ್ರದುರ್ಗದಲ್ಲಿ ಮದಕರಿನಾಯಕ  ಥೀಮ್ ಪಾರ್ಕ್ ನಿರ್ಮಾಣ ಮಾಡಲು ವೇಗ ನೀಡಲು ಸರ್ಕಾರಕ್ಕೆ ಗಡುವು ನೀಡಿ ಮಹಾಂತೇಶ್ ನಾಯಕ ಅವರು ಇತ್ತೀಚೆಗೆ ರಾಜ್ಯ ಸರ್ಕಾರದ ಜೊತೆಗೆ ಚರ್ಚೆ ನಡೆಸಿದ್ದಾರೆ.

#ಯಶಸ್ವೀ_ಮದಕರಿನಾಯಕ_ಜಯಂತಿಗೆ_ಸಮನ್ವಯಕಾರ
ಮಹಾಂತೇಶ ನಾಯಕ ಅವರು ಚಿತ್ರದುರ್ಗದಲ್ಲಿ ೨೦೧೫  ರಲ್ಲಿ ನಡೆಸಲು ನಿಶ್ಚಯಿಸಿದ್ದ ಮದಕರಿನಾಯಕ ಪಟ್ಟಾಭಿಷೇಕ ಉತ್ಸವವು ಕೆಲ ಪಟ್ಟಭದ್ರ ರಾಜಕಾರಣಿಗಳ ಪಟ್ಟಭದ್ರ ಹಿತಾಸಕ್ತಿಯ ಕಾರಣಕ್ಕಾಗಿ ನಿಂತು ಹೋಯಿತು ಆದರೆ ನಂತರ ಕಳೆದ ವರ್ಷ ಮತ್ತೆ ಪೀಲ್ಡಿಗಿಳಿದ ಶ್ರೀ ಮಹಾಂತೇಶ ನಾಯಕರು ತಮ್ಮ ಜೊತೆಗೆ ಜಿಲ್ಲೆಯ ಎಲ್ಲಾ ನಾಯಕ ಮುಖಂಡರ ಜೊತೆಗೆ ಮಾತನಾಡಿ ಸಮನ್ವಯದೊಂದಿಗೆ ಯಶಸ್ವಿಯಾಗಿ ಕೊರೊನಾ ಮಧಗಯೂ ಮಹಾರಾಜ ಮದಕರಿನಾಯಕ ಅವರ ಜಯಂತಿಯನ್ನು ಕಳೆದ ಅಕ್ಟೋಬರ್ ೧೩ ರಂದು ನಡೆಸಿ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದರು...

#ಕೇಸು_ಜೈಲಿಗೆ_ಹೆದರದೆ_ಪುಟಿದೆದ್ದ_ಬೇಡರಹುಲಿ

ಸದಾ ಹೋರಾಟದ ಮಧ್ಯೆ ಇವರನ್ನು ತುಳಿಯುವ ಅನೇಕ ಸಂಚುಗಳು ನಡೆದರೂ ಅನೇಕ ಸುಳ್ಳು ಕೇಸು ಹಾಕಿ ಬಂಧಿಸಿದರೂ ಜಗ್ಗದೇ ಕುಗ್ಗದೆ ತಾವು ನಡೆದು ಬಂದ ಹಾದಿಯನ್ನು ಬಿಡಲಿಲ್ಲ, ಮತ್ತೆ ಮತ್ತೆ ಪುಟಿದೆದ್ದು ಮತ್ತೆ ಚಿಗುರೊಡೆದರು ನಾಯಕರ ರಕ್ತದ  ಹಠ ಸ್ವಭಾವದಿಂದ ಮತ್ತೆ ಸಮಾಜಕ್ಕಾಗಿ ದುಡಿಯಲು ಮುಂದಾದರು,ಇತ್ತೀಚೆಗೆ ಇವರ ಮೇಲೆ ಬಳ್ಳಾರಿಯಲ್ಲಿ ಎಬಿವಿಪಿ ಹೋರಾಟಗಾರನಾಗಿದ್ದ ವೇಳೆ ದಾಖಲಿಸಿದ್ದ ಸುಳ್ಳು ಕೇಸ್ ಗುಳು ಖುಲಾಸೆಯಾದವು,ಕೋರ್ಟ್ ನಲ್ಲಿ ಗೆದ್ದು ಕಳೆದ ವರ್ಷ ಸಂಭ್ರಮಾಚರಣೆ ಮಾಡಿದರು

# ಜಿಲ್ಲೆಯೆ ನಾಯಕ ಸಮುದಾಯದ ಮಹನೀಯ ರಾಜಕಾಣಿಗಳ ಹಾದಿಗೆ ಮುನ್ನುಡಿ..

ಪ್ರಸ್ತುತ ಮಹಾಂತೇಶ ನಾಯಕ ಅವರು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ,ಪಕ್ಷಕ್ಕೆ ಬಂದು ನೇರವಾಗಿ ರಾಜ್ಯ ಮಟ್ಟದ ಜವಾಬ್ದಾರಿ ವಹಿಸಿದ್ದು ಮಾತ್ರವಲ್ಲದೇ ,ಶಿರಾ ಉಪ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು,

ರಾಜಕೀಯಕ್ಕೆ ಬೇಕಾದ ಶಿಸ್ತಿನ ,ಸಮಯಪಾಲನೆಯ ವ್ಯಕ್ತಿತ್ವ,ಕಟೀಬದ್ಧ ನಿಲುವು ,ನಿರಂತರ ಅಧ್ಯಯನ ಇವರ ಪ್ರಮುಖ ಗುಣಗಳು.

ಚಿತ್ರದುರ್ಗ ಜಿಲ್ಲೆ ಕಂಡಂತಹ ಭೀಮಪ್ಪನಾಯಕರು,ಹೋ.ಚಿ ಬೋರಯ್ಯ, ಮೊದಲಾದ ಮಹನೀಯರ ನಂತರ ಯುವ ರಾಜಕಾರಣಿಗಳ ಪೈಕಿ ಮಹಾಂತೇಶ ನಾಯಕ ಅದೇ ರೀತಿಯ ಛಾಪು ಹೊಂದಿದವರಾಗಿದ್ದಾರೆ...!!
ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರಮುಖ ರಾಜಕಾರಣಿಯಾಗಿ ಹೊರಹೊಮ್ಮಿ ರಾಜ್ಯದಾದ್ಯಂತ ಇರುವ ನಮ್ಮ ಸಮುದಾಯದ ಯುವಮನಗಳಗೆ ಮಾರ್ಗಸೂಚಿಯಾಗಲಿ

#

No comments:

Post a Comment