Monday, July 5, 2021

ನಾಯಕ ಸಮುದಾಯವರು ದಲಿತರೇ?ಕ್ಷತ್ರೀಯರೇ?#

ನಾಯಕ ಈ ಪದವನ್ನು ಕೇಳಿದ ಎಲ್ಲರಿಗೂ ಕೂಡ ಅದೇನೋ ರೋಮಾಂಚನ ಕಾರಣ ನಾಯಕ ಪದ ಬಹಳ ವಿಶಾಲವಾದ ಅರ್ಥವನ್ನು ಒಳಗೊಂಡಿರುವಂತೆ ಪದವಾಗಿದೆ ಇದು ಸಾಮಾನ್ಯವಾಗಿ ಎಲ್ಲರ ಹಿತ ಕಾಯುವ ಶಕ್ತಿ ಇರುವ ವ್ಯಕ್ತಿಯನ್ನು ಉಚ್ಚರಿಸಲ್ಪಡುವ ನಾಯಕ ಎನ್ನುವ ಪದವಾಗಿದೆ

ನಾಯಕ ಪದವು ಅನೇಕ ಬಾರಿ ದಿನನಿತ್ಯ ಜೀವನದಲ್ಲಿ ಹಾಸುಹೊಕ್ಕಾಗಿ ಬಳಕೆಯಾಗುತ್ತಿದೆ ರಾಜಕಾರಣದಲ್ಲಿ ಎಲ್ಲ ಕ್ಷೇತ್ರದಲ್ಲೂ ಕೂಡ ನಾಯಕ ನಮಗೆಲ್ಲರಿಗೂ ಕೂಡ ಚಿರಪರಿಚಿತವಾಗಿರುವ ಶಬ್ದವಾಗಿದೆ ಕೇಳಿದ ತಕ್ಷಣ ಪೂಜ್ಯಭಾವನೆ ನಮ್ಮಲ್ಲಿ ಮೂಡುತ್ತದೆ

ನಾಯಕ ಹೇಗಿರಬೇಕು ನಾಯಕ ಯಾವ ಶಕ್ತಿ ಹೊಂದಿರಬೇಕು ನಾಯಕನಾಗ ಬೇಕಾದರೆ ನಾವೇನು ಮಾಡಬೇಕು ನಾಯಕತ್ವದ ಗುಣ ಮತ್ತು ಅದರ ಮಹತ್ವ ಈ ರೀತಿ ಹಲವಾರು ದೃಷ್ಟಿಯಲ್ಲಿ ನಾವು ಗಮನಿಸುತ್ತ ಬರುತ್ತಿದ್ದೇವೆ ಒಟ್ಟಾರೆ ಸಮಾಜದ ಏಳಿಗೆಗೆ ಅನೇಕ ನಾಯಕತ್ವ ಗಳು ಅನೇಕ ವರ್ಷಗಳಿಂದ ದಿವ್ಯ ಮಾರ್ಗದರ್ಶನವನ್ನು ನೀಡುತ್ತಾ ಸಮಾಜದ ಉನ್ನತಿಯನ್ನು ಸಾಧಿಸಲು ಪ್ರಮುಖ ಪಾತ್ರವನ್ನು ವಹಿಸಿವೆ

ಇಷ್ಟೆಲ್ಲಾ ಅಂಶಗಳನ್ನು ಗಮನಿಸಿದ ನಮಗೆ ನಾಯಕ ಅನ್ನುವ ಪದದ ಹೆಸರಿನಿಂದ ಕರೆಯಲ್ಪಡುವ ಒಂದು ಸಮುದಾಯವು ಕರ್ನಾಟಕದಲ್ಲಿ ಅತ್ಯಂತ ಪ್ರಸಿದ್ಧ ಕ್ಷತ್ರಿಯ ಗುಣಗಳನ್ನು ಒಳಗೊಂಡಿರುವ ಸಮುದಾಯವಾಗಿ ನಾಡಿನ ಎಲ್ಲರಿಗೂ ಕೂಡ ಚಿರಪರಿಚಿತವಾಗಿದೆ

ನಾಯಕ ಸಮುದಾಯವು ನಾಯಕ ಎಂದು ಕರೆಸಿಕೊಳ್ಳಲು ಹಲವಾರು ಅಂಶಗಳು ಪ್ರಮುಖ ಪಾತ್ರವನ್ನು ವಹಿಸಿವೆ ಹಾಗೂ ಹೆಸರನ್ನು ತಂದುಕೊಡಲು ಕಾರಣೀಭೂತವಾಗಿವೆ ಅಂತಹ ಸಂಗತಿಗಳು ಯಾವುವು ಎಂಬುದನ್ನು ನಾವು ಮೆಲುಕು ಹಾಕುವುದಾದರೆ ನಾಯಕ ಸಮುದಾಯ ಅರ್ಥಾತ್ ಬೇಡರು ಎಂದು ಕರೆಸಿಕೊಳ್ಳುವ ಇವರು ಬುಡಕಟ್ಟು ಲಕ್ಷಣಗಳನ್ನು ಹೊಂದಿಕೊಂಡು ಮತ್ತು ಬೇಟೆಗಾರಿಕೆ ಕಾಡಿನ ಜೊತೆಗೆ ಸಂಬಂಧ ಹೊಂದಿ ನಂತರದ ದಿನಗಳಲ್ಲಿ ಮಾನವನ ಜೀವನ ವಿಕಾಸವಾದಂತೆ ಇವರುಗಳು ವಾಸಮಾಡುವ ಕಾಡುಮೇಡುಗಳಲ್ಲಿ ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ತಮ್ಮದೇ ಆಗಿರುವ ಅರಮನೆಗಳನ್ನು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ರಾಜ್ಯಭಾರ ಮಾಡಿಕೊಂಡು ಬೆಳೆದುಬಂದ ಇತಿಹಾಸ ನಮಗೆಲ್ಲರಿಗೂ ಗೊತ್ತಿದೆ

ನಾಯಕ ಸಮುದಾಯವು ಬರೀ ಬೇಟೆಗಾರಿಕೆ ಮಾತ್ರವಲ್ಲದೆ ನಾಡಿನ ಜನತೆಗೆ ಬಂದಾಗಲೆಲ್ಲ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಇಡೀ ಸಮಾಜದ ಎಲ್ಲ ವರ್ಗಗಳ ಜನರ ಕಾಪಾಡುವುದರಲ್ಲಿ ಇವರು ಅಗ್ರಗಣ್ಯರು ಎಲ್ಲ ಸಮುದಾಯಗಳ ಮನೆಮಾತಾಗಿ ಎಲ್ಲರಿಂದ ಹೊಗಳಿಕೆಗೆ ಪಾತ್ರವಾದ ಸಮುದಾಯವಾಗಿದೆ

ಅಂತಹ ಪ್ರಮುಖ ಪ್ರಾಥಃಸ್ಮರಣೀಯ ನಾಯಕ ಸಮುದಾಯದ ಅಗ್ರಗಣ್ಯರು ಬೇಡರಕಣ್ಣಪ್ಪ, ಮಹರ್ಷಿ ವಾಲ್ಮೀಕಿ ,ಏಕಲವ್ಯ ,ಶಬರಿ ,ಸಿಂಧೂರ ಲಕ್ಷ್ಮಣ ಸುರಪುರದ ವೆಂಕಟಪ್ಪನಾಯಕ, ವೀರ ಕಂಪಿಲರಾಯ ,ಗಂಡುಗಲಿ ಆನೆಗೊಂದಿ ಅರಸರು ,ಲಗಲಿಯ ಬೇಡರು ವಿಜಯನಗರದ ಅರಸರು ಹಾಗೂ ವಿಜಯನಗರ ಸಾಮ್ರಾಜ್ಯ ,ಎಚ್ಚಮ್ಮನಾಯಕ, ಚಿತ್ರದುರ್ಗದ ನಾಯಕರು, ಮದಕರಿ ನಾಯಕ, ತರೀಕೆರೆ ಪಾಳೆಯಗಾರರು, ನಾಯಕನಹಟ್ಟಿ ಪಾಳೇಗಾರರು, ಕೆಳದಿ ನಾಯಕರು ,ಎಲ್ ಜಿ ಹಾವನೂರು ಅವರು ,ಎಲ್ಲಪ್ಪ ನಾಯಕನ ಕೋಟೆಯ ನಾಯಕರು ,ತಮಿಳುನಾಡಿನ ಮಧುರೈ ತಂಜಾವೂರು ನಾಯಕರು, ಶ್ರೀಲಂಕಾದ ಕಂಡಿ ಮನೆತನ ನಾಯಕರು ತಮಿಳುನಾಡಿನ ತಂದೆ ಪೆರಿಯಾರ್ ರಾಮಸ್ವಾಮಿ ನಾಯಕರು, ಹೀಗೆ ಹೇಳುತ್ತಾ ಹೋದಂತೆಲ್ಲ ಪಟ್ಟಿ ಕೈಗೆ ಸಿಗದಷ್ಟು ವಿಶಾಲವಾಗಿ ಬೆಳೆಯುತ್ತ ಹೋಗುತ್ತದೆ ಇಂತಹ ವಿಶಾಲವಾದ ಮಹಾಕ್ಷತ್ರಿಯ ಹಾಗೂ ಮಹಾತ್ಯಾಗ ಪರಂಪರೆಯ ಸಮುದಾಯ ನಾಯಕ ಸಮುದಾಯವಾಗಿದೆ

ಇಡೀ ದಕ್ಷಿಣ ಭಾರತದಲ್ಲಿ ಇಸ್ಲಾಮಿನ ದಾಳಿ ಹಾಗೂ ಸುಲ್ತಾನರ ದಾಳಿಗಳನ್ನು ಎದುರಿಸಲು ದಕ್ಷಿಣ ಭಾರತದ ಅನೇಕ ಸಾಮ್ರಾಜ್ಯದ ಅರಸರು ವಿಫಲರಾದಾಗ ಮೊಟ್ಟಮೊದಲ ಬಾರಿಗೆ ರಾಜಿ ಇಲ್ಲದೆ ಅವರನ್ನು ಎದುರುಗೊಂಡು ರಣರಂಗದಲ್ಲಿ ಮಣ್ಣುಮುಕ್ಕಿಸಿ ಇಡೀ ದಕ್ಷಿಣ ಭಾರತದ ಸಮಸ್ತ ಹಿಂದೂ ಸಮುದಾಯವನ್ನು ಕಾಪಾಡಿಕೊಳ್ಳಲು ತಮ್ಮ ಶಕ್ತಿಯನ್ನು ಸಮರ್ಪಿಸಿದ ಮಹಾತ್ಯಾಗ ಪರಂಪರೆಯ ಕಂಪ್ಲಿ ಸಾಮ್ರಾಜ್ಯದ ಮಹಾ ಮಹಾಪರಾಕ್ರಮಿ ಅರಸ ವೀರ ಕಂಪಿಲರಾಯ ಈ ಸಮುದಾಯಕ್ಕೆ ಅಗ್ರಗಣ್ಯ ತಳಪಾಯವನ್ನು ಹಾಕಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾನೆ ಹಕ್ಕ-ಬುಕ್ಕರು ಈತನ ಮಗಳ ಮಕ್ಕಳು ಎಂಬ ಮಾಹಿತಿ ಇದೆ ಅಷ್ಟೇ ಅಲ್ಲದೆ ಈ ಹಕ್ಕ-ಬುಕ್ಕರು ಮುಂದೆ ವಿಜಯನಗರ ಸ್ಥಾಪಿಸಲು ಇದೇ ಕಂಪಿಲರಾಯ ಹಾಗೂ ಆತನ ಮಗ ಗಂಡುಗಲಿ ಕುಮಾರರಾಮ ಪ್ರೇರಣೆಯಾಗಿದ್ದಾರೆ ಅಷ್ಟೇ ಅಲ್ಲದೆ ಚಿತ್ರದುರ್ಗದ ನಾಯಕರ ಸಂಸ್ಥಾನದ ಸ್ಥಾಪನೆಗೂ ಕೂಡ ಇವರ ಇವರ ಪ್ರೇರಣೆ ಕಾರಣವಾಗಿದೆ ಅಷ್ಟೇ ಅಲ್ಲದೆ ಸುರಪುರದ ವೆಂಕಟಪ್ಪ ನಾಯಕನ ಸ್ವಾತಂತ್ರ ಹೋರಾಟಕ್ಕೆ ಹಾಗೂ ಹಲಗಲಿ ಬೇಡರ ಹೋರಾಟಕ್ಕೂ ವೀರ ಕಂಪಿಲರಾಯ ಹಾಕಿಕೊಟ್ಟ ಮೇಲ್ಪಂಕ್ತಿ ಪ್ರೇರಣೆಯಾಗಿದೆ

ಮೈಸೂರಿನಲ್ಲಿ ರಾರಾಜಿಸಲು ಪಡುವ ದಸರಾದಲ್ಲಿ ನ ಅಂಬಾರಿಯ ಇದೆ ವೀರ ಕಂಪಿಲರಾಯ ಕಾಕತೀಯ ಅರಸರಿಂದ ಗೆದ್ದುಕೊಂಡ ವಿಜಯದ ಪತಾಕೆ ಯಾಗಿದೆ ಕಾಲನಂತರದಲ್ಲಿ ಅಂಬಾರಿ ವಿಜಯನಗರದರಸರ ಮುಡಿಗೆ ಮಹಾನವಮಿ ದಿಬ್ಬ ಹಾಗೂ ಹಂಪಿಯ ಸುಂದರ ಪರಿಸರದಲ್ಲಿ ಆರಾಧಿಸಲ್ಪಟ್ಟ ಹಂಪಿಯ ಆಕರ್ಷಣೀಯವಾಗಿತ್ತು ನಂತರದಲ್ಲಿ ವಿಜಯನಗರದ ಅರಸರ ಆಳ್ವಿಕೆಯ ಪತನದ ನಂತರ ವಿಜಯನಗರದ ಅಳಿದುಳಿದ ಕೊನೆಯ ಮನೆತನದ ಅರಸರು ಅಂಬಾರಿಯನ್ನು ಸುರಕ್ಷಿತವಾಗಿ ಇಡುವ ಸಲುವಾಗಿ ಮೈಸೂರು ಒಡೆಯರ ಕೊಟ್ಟು ಆಶ್ರಯವನ್ನು ಕೆಲಕಾಲ ಪಡೆದಿದ್ದರು ಹಾಗಾಗಿ ಅಂಬಾರಿಯ ವಾರಸುದಾರಿಕೆ ಮೂಲತಹ ಕರ್ನಾಟಕದ ಮಹಾಕ್ಷತ್ರಿಯ ಸಮುದಾಯವಾದ ನಾಯಕ ಸಮುದಾಯದ ಪ್ರಸಿದ್ಧ ಅರಸ ವೀರ ಕಂಪಿಲರಾಯನ ಹಾಗೂ ಆತನ ಸಾಮ್ರಾಜ್ಯಕ್ಕೆ ಸೇರಿದ್ದು ಎಂದು ಹೇಳಲು ನಮಗೆಲ್ಲರಿಗೂ ಕೂಡ ಹೆಮ್ಮೆಯಾಗುತ್ತದೆ

ಕೆಲವರು ನಾಯಕ ಸಮುದಾಯವನ್ನು ದಲಿತ ಸಮುದಾಯ ಎಂದು ಬಿಂಬಿಸಲು ಹಲವಾರು ನಾಟಕಗಳನ್ನು ಶುರು ಮಾಡಿದ್ದಾರೆ ಆದರೆ ನಾಯಕ ಸಮುದಾಯದ ಹಿನ್ನೆಲೆ ಇತಿಹಾಸವನ್ನು ಆಳವಾಗಿ ಅಗೆದು ಬಗೆದು ನೋಡಿದ ಪ್ರತಿಯೊಬ್ಬರಿಗೂ ನಾಯಕ ಸಮುದಾಯಕ್ಕೆ ಇತಿಹಾಸವಿದೆ ನಾಯಕ ಸಮುದಾಯ ಮೊದಲಿನಿಂದಲೂ ಕ್ಷತ್ರಿಯ ತನವನ್ನು ಉಳಿಸಿಕೊಂಡು ಬಂದಿರುವುದು ವೀರಪರಂಪರೆ ಸಮುದಾಯವಾಗಿದೆ ಅನೇಕ ರಾಜರು ಅಸಂಖ್ಯಾತ ಸೈನಿಕರು ಅಸಂಖ್ಯಾತ ಸೇನಾಪಡೆಗಳು ಅಸಂಖ್ಯಾತ ವೀರರು ತ್ಯಾಗ ಬಲಿದಾನಗಳ ಮೂಲಕ ತಮ್ಮ ಕ್ಷೇತ್ರವನ್ನು ತೋರಿಸಿರುವಂತೆ ಲಕ್ಷಣಗಳು ನಾಯಕ ಸಮುದಾಯದಲ್ಲಿ ಸಿಗುತ್ತವೆ ಇಂತಹ ಸಂಗತಿಗಳಿಗೆ ಉತ್ತಮ ಉದಾಹರಣೆಯಾಗಿ ಚಿತ್ರದುರ್ಗದ ನಾಯಕರ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ಖಾಸಾ ಬೇಡರ ಪಡೆ ಎಂಬ ಚಿತ್ರದುರ್ಗದ ನಾಯಕರ ಅತ್ಯಂತ ಪ್ರಮುಖ ಸೈನಿಕ ಶಕ್ತಿಯಾಗಿದ್ದ ಈ ಕಡೆ ಚಿತ್ರದುರ್ಗದ ನಾಯಕರು ಸುತ್ತಮುತ್ತಲಿನ ಎಲ್ಲ ಪ್ರಾಂತ್ಯಗಳ ರಾಜರಿಗೆ ನಿದ್ದೆಗೆಡಿಸುವ ಹಾಗೂ ಎಂದಿಗೂ ಸೋಲದೆ ಸದಾ ಗೆಲುವಿನಲ್ಲಿ ತೇಲುವ ಶಕ್ತಿಯನ್ನು ನೀಡಿದ್ದು ಇದೇ ಕಾಸ ಬೇಡರ ಪಡೆ ತಮ್ಮದೇ ಸಮುದಾಯದ ಅತ್ಯಂತ ಕಟ್ಟುಮಸ್ತಾದ ವೀರರನ್ನು ಅಂದರೆ ಬೇಡ ಸಮುದಾಯದ ಬೇಟೆಗಾರಿಕೆ ಹಾಡುವ ಬಿಸಿರಕ್ತದ ಯುವಕರನ್ನು ನಮ್ಮ ಇಂದಿನ ಸೈನಿಕರಲ್ಲಿ ಕಮಾಂಡೋಗಳನ್ನು ತರಬೇತುಗೊಳಿಸುವ ಅಂದಿನ ಕಾಲದ ಚಿತ್ರದುರ್ಗದ ನಾಯಕರು ಬೇಡರ ಪಡೆಯನ್ನು ಸಜ್ಜುಗೊಳಿಸುತ್ತಿದ್ದರು ಚಿತ್ರದುರ್ಗದ ಸೈನ್ಯದ ಭಾಗವಾಗಿದ್ದ ಈ ಪಡೆ ಚಿತ್ರದುರ್ಗದ ಸೈನ್ಯ ಸೋಲುತ್ತಿದೆ ಎಂಬ ಮಾಹಿತಿ ಗೊತ್ತಾದ ತಕ್ಷಣ ಅಸೀಮವಾದ ದಾಳಿಯನ್ನು ತಂತ್ರಗಳನ್ನು ರೂಪಿಸುವುದರ ಮೂಲಕ ಎಂತಹ ಶತ್ರುಗಳನ್ನು ಎಂತಹ ವೀರ ಸೈನಿಕರನ್ನು ಕೂಡ ಹಳ್ಳಕ್ಕೆ ಬೀಳಿಸುವ ಸೈನಿಕರು ಈ ಪಡೆಯಲ್ಲಿ ಇದ್ದರು ಹಾಗಾಗಿಯೇ ಚಿತ್ರದುರ್ಗದ ನಾಯಕರಿಗೆ ಸದಾ ಕೆಲವು ಸಿದ್ಧ ಸೂತ್ರವಾಗಿತ್ತು
ಇಂತಹ ಸೈನಿಕ ಬಲದ ಇತಿಹಾಸವು ನಾಯಕರಿಗೆ ನಿರಂತರವಾಗಿ ಮುಂದುವರೆದುಕೊಂಡು ಬಂದಿದೆ ಮಹಾಭಾರತದ ಕುರುಕ್ಷೇತ್ರ ಯುದ್ಧದ 11 ಸೇನಾಪಡೆಗಳು ಬೇಡರ ವೀರಯೋಧ ರಿಂದಲೇ ಕೂಡಿದ್ದವು ಎಂಬ ಬಗ್ಗೆ ಕೂಡ ಮಾಹಿತಿಗಳಿವೆ ಇಂತಹ ಕ್ಷತ್ರಿಯ ಹಿನ್ನೆಲೆಯ ನಾಯಕ ಸಮುದಾಯವು ಹೆಚ್ಚಾಗಿ ವಾಸ ಮಾಡಿದ್ದು ಕಾಡಿನಲ್ಲಿ ನಂತರ ನಾಡಿಗೆ ಬಂದಾಗ ಇವರ ಕ್ಷತ್ರಿಯ ಗುಣಗಳಿಂದ ಇವರು ರಾಜರಾದರೂ ಸಾಮ್ರಾಜ್ಯಗಳನ್ನು ಕಟ್ಟಿ ಬೆಳೆಸಿದರು ಎಲ್ಲ ಸಮುದಾಯದ ಜನಗಳನ್ನು ತಮ್ಮ ಜೊತೆಗೆ ಇರಿಸಿಕೊಂಡು ಎಲ್ಲರ ಹಿತ ಕಾಯುತ್ತ ಅವರಿಗಾಗಿ ಬದುಕಿದರು ಇವರನ್ನು ಕೀಳಾಗಿ ನೋಡುವುದು ಇವರನ್ನು ಮನೆಯಿಂದ ಹೊರಗೆ ನಿಲ್ಲಿಸುವ ಪರಂಪರೆ ಎಂದು ಕೂಡ ಇರಲಿಲ್ಲ ಆದರೆ ಇಂದು ಅನುಸೂಚಿತ ಪಂಗಡ ಪಟ್ಟಿಗೆ ನಾಯಕ ಸಮುದಾಯ ಬಂದಿರುವುದು ಯಾಕೆಂದರೆ ನಾಯಕ ಸಮುದಾಯವು ಸದಾ ಯುದ್ಧಗಳಿಂದ ಹೋರಾಟಗಳಿಂದ ಸಂಪತ್ತನ್ನು ತನ್ನ ಆರ್ಥಿಕ ಸ್ಥಿತಿಯನ್ನು ದುಸ್ಥಿತಿಗೆ ತಂದುಕೊಳ್ಳಲು ಕಾರಣೀಭೂತವಾಗಿದೆ ನಾಯಕ ಸಮುದಾಯದ ಶಾಲೆಯಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಶಕ್ತಿಯೊಂದನ್ನು ಭಾರತದ ಸಂವಿಧಾನದ ಅನುಸೂಚಿಗಳು ಅಡಿಯಲ್ಲಿ ಮೀಸಲಾತಿಯನ್ನು ಪಡೆಯುತ್ತಿದೆ ಸಾಮಾಜಿಕ ನಿರ್ಬಂಧದ ಶಿಕ್ಷೆಗಳನ್ನು ಯಾವುದೇ ಕಾರಣಕ್ಕೂ ನಾಯಕ ಸಮುದಾಯವು ಕರ್ನಾಟಕದಲ್ಲಿ ಅನುಭವಿಸಿರಲಿಲ್ಲ ಎಂಬುದು ಅತ್ಯಂತ ಶುದ್ಧ ಸತ್ಯ.

2 comments:

  1. Good and meaning article sir.
    Please add reference sources for getting more information.

    ReplyDelete
  2. Ok nimage gottantaha itihasa chennagide but dalita emba padakke avamana madidante illave nimma matugalu

    ReplyDelete