Friday, July 16, 2021

ಚಿತ್ರದುರ್ಗದ ಕೋಟೆ ಉನ್ನತಿ ಕ್ರಮಕ್ಕೆ ಸೂಚಿಸಿದ ಕೇಂದ್ರ ಸಚಿವ ನಾರಾಯಣಸ್ವಾಮಿ ಅವರ ಕಾರ್ಯ ಅಭಿನಂದನಾರ್ಹ:ಮಹಾಂತೇಶ ನಾಯಕ

ಚಿತ್ರದುರ್ಗ:- ನೂತನವಾಗಿ ಕೇಂದ್ರ ಸಚಿವರಾಗಿ ಆಯ್ಕೆಯಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸದಸ್ಯ ಶ್ರೀ ನಾರಾಯಣಸ್ವಾಮಿ ಅವರು ನಿನ್ನೆ ದೆಹಲಿಯಲ್ಲಿ ಚಿತ್ರದುರ್ಗದ ಕೋಟೆಯ ಉನ್ನತೀಕರಿಸುವ ಕುರಿತು ಸಭೆ ನಡೆಸಿರುವುದು ಮತ್ತು ಉನ್ನತೀಕರಿಸಲು ಅಧಿಕಾರಿಗಳಿಗೆ ಕಳಿಸಿರುವುದು ಅತ್ಯಂತ ಸ್ವಾಗತಾರ್ಹ ಕ್ರಮವಾಗಿದೆ ಮುಂದಿನ ದಿನಗಳಲ್ಲಿ ಚಿತ್ರದುರ್ಗದ ಕೋಟೆಯು ಇನ್ನಷ್ಟು ಆಕರ್ಷಣೀಯವಾಗಿ ರೂಪ ಪಡೆಯಲಿದೆ ಎಂದು ಎಸ್ ಟಿ ಮೋರ್ಛಾ ರಾಜ್ಯ ಕಾರ್ಯದರ್ಶಿ ಶ್ರೀ ಮಹಾಂತೇಶ ನಾಯಕ ಅವರು ತಿಳಿಸಿದ್ದಾರೆ

ಇಂದು ದೆಹಲಿಯ ಶಾಸ್ತ್ರಿ ಭವನದ ಕೇಂದ್ರ ಕಚೇರಿಗೆ ಆರ್ಕಿಯೋಲಾಜಿಕಲ್ ಡಿಪಾರ್ಟ್ಮೆಂಟ್ ಜಂಟಿ ಕಾರ್ಯದರ್ಶಿಗಳು ಭೇಟಿ ನೀಡಿ ಚಿತ್ರದುರ್ಗದ #ಮದಕರಿನಾಯಕರ_ಐತಿಹಾಸಿಕ_ಕೋಟೆಯ_ನವೀಕರಣದ ಮಾಹಿತಿ ನೀಡಿದರು, ಮುಂದಿನ ದಿನಗಳಲ್ಲಿ ಕೋಟೆಯನ್ನು ಉನ್ನತಿಕರಿಸಿ ಪ್ರಸಿದ್ಧ ಪ್ರವಾಸಿತಾಣವನ್ನಾಗಿ ಮಾಡಲು ಸೂಚನೆ ನೀಡಲಾಯಿತು.......
 ಚಿತ್ರದುರ್ಗದ ಕೋಟೆ ಯು ಭಾರತದಲ್ಲಿ ಅತ್ಯಂತ ಪ್ರಬಲ ಕೋಟೆಗಳಲ್ಲಿ ಒಂದಾಗಿದ್ದು ಪ್ರಸಿದ್ಧವಾಗಿರುವ ಕೋಟೆಯಾಗಿದೆ

No comments:

Post a Comment